translation dict |
|---|
{
"Hindi": "मानवजाति की समस्याओं का समाधन समूह शक्ती संघ में गूहित है, अकेला मानव दुर्बल और स्वार्थी हो जाता है।",
"Kannada": "ಮಾನವಜಾತಿಯ ಸಮಸ್ಯೆಗಳ ಪರಿಹಾರವು ಸಂಘದ ಶಕ್ತಿಯಲ್ಲಿ ಅಡಗಿದೆ, ಒಬ್ಬಂಟಿ ಮನುಷ್ಯನು ದುರ್ಬಲ ಮತ್ತು ಸ್ವಾರ್ಥಿಯಾಗುತ್ತಾನೆ.",
"Sanskrit": "मानवजातेः समस्यानां समाधानं समूहशक्तौ किञ्च संघे गूहितं वर्तते, एकाकी मानवः दुर्बलः स्वार्थपरश्च सञ्जायते।"
} |
{
"Hindi": "यज्ञ का तात्पर्य त्याग होता है।",
"Kannada": "ಯಜ್ಞದ ತಾತ್ಪರ್ಯವೇ ತ್ಯಾಗ.",
"Sanskrit": "यज्ञस्य महत् तात्पर्यं भवति त्यागः।"
} |
{
"Hindi": "अपना प्रिय पदार्थ अग्नि तथा वायु के माध्यम से सकल संसार के कल्याण के लिए यज्ञ के द्वारा बाँया जाता है।",
"Kannada": "ತನ್ನ ಪ್ರಿಯ ಪದಾರ್ಥವನ್ನು ಅಗ್ನಿ ಮತ್ತು ವಾಯುವಿನ ಮೂಲಕ ಸಕಲ ಸಂಸಾರದ ಕಲ್ಯಾಣಕ್ಕಾಗಿ ಯಜ್ಞದ ಮೂಲಕ ವಿತರಿಸಲಾಗುವುದು.",
"Sanskrit": "स्वस्य प्रियपदार्थादिकम् अग्नेः तथा वायोः माध्यमेन सकलसंसारस्य कल्याणाय यज्ञद्वारा वितीर्यते।"
} |
{
"Hindi": "वायु के शोधनसे सभी के आरोग्य वर्धन का अवसर प्राप्त होता है।",
"Kannada": "ವಾಯುಶುದ್ಧಿಯಿಂದ ಎಲ್ಲರ ಆರೋಗ್ಯವರ್ಧನೆಗೆ ಅವಕಾಶ ಲಭಿಸುವುದು.",
"Sanskrit": "वायोः शोधनेन सर्वेषाम् आरोग्यवर्धनस्य अवसरः प्राप्यते।"
} |
{
"Hindi": "आहूत वायु प्राणी मात्र का स्वास्थ्य वर्धन करती है, और रोग निवारण में सहायक होती है।",
"Kannada": "ಆಹುತಿಯನ್ನು ಪಡೆದ ವಾಯುದೇವತೆಗಳು ಪ್ರಾಣಿಗಳೆಲ್ಲರ ಸ್ವಾಸ್ಥ್ಯವರ್ಧನೆ ಮಾಡುವರು, ರೋಗನಿವಾರಣೆಯಲ್ಲಿ ಸಹಾಯಕರಾಗುವರು.",
"Sanskrit": "हूताः वायवः प्राणिमात्रस्य स्वास्थ्यवर्धनं कुर्वन्ति, रोगनिवारणे सहायकाश्च भवन्ति।"
} |
{
"Hindi": "यज्ञकाल में उच्चरित वेदमन्त्रों से लोगों के अंतःकरण में सात्त्विक शुद्धता उत्पन्न होती है।",
"Kannada": "ಯಜ್ನಕಾಲದಲ್ಲಿ ಉಚ್ಚರಿಸುವ ವೇದಮಂತ್ರಗಳಿಂದ ಜನರ ಅಂತ:ಕರಣದಲ್ಲಿ ಸಾತ್ವಿಕವಾದ ಶುದ್ಧತೆಯು ಉಂಟಾಗುತ್ತದೆ.",
"Sanskrit": "यज्ञकाले उच्चरितैः वेदमन्त्रैः जनानाम् अंतःकरणे सात्त्विकी शुद्धता जायते।"
} |
{
"Hindi": "इस प्रकार स्वल्प प्रयास से ही लोगों का महान् उपकार होता है।",
"Kannada": "ಹೀಗೆ ಸ್ವಲ್ಪ ಪ್ರಯಾಸದಿಂದಲೇ ಜನರಿಗೆ ದೊಡ್ಡ ಉಪಕಾರ ಸಾಧ್ಯವಾಗುತ್ತದೆ.",
"Sanskrit": "एवं प्रकारेण अल्पप्रयासेनैव जनानां महान् उपकारः साध्यते।"
} |
{
"Hindi": "यदि माता अपने रक्त-मांस के एक भाग को एक नवजातक के निर्माण के लिए नही छोड़ती, प्रसव वेदना को सहन नहीं करती, नवजातक को दुग्ध नहीं पिलाती, पालन-पोषण आदि में यत्न नहीं करती, सब निःस्वार्थ भाव से नहीं करती, तो मनुष्यों का जीवन सम्भव नहीं है।",
"Kannada": "ತಾಯಿಯಾದವಳು ತನ್ನ ದೇಹದ ರಕ್ತ-ಮಾಂಸದ ಒಂದು ಭಾಗವನ್ನು ಒಂದು ನವಜಾತಶಿಶುವಿಗೆ ಕೊಡದಿದ್ದರೆ, ಪ್ರಸವವೇದನೆಯನ್ನು ಸಹಿಸದಿದ್ದರೆ, ನವಜಾತಶಿಶುವಿಗೆ ಎದೆಹಾಲು ಕುಡಿಸದಿದ್ದರೆ, ಪಾಲನೆ-ಪೋಷಣೆಗಳಲ್ಲಿ ಆಯಾಸ ಪಡದಿದ್ದರೆ, ನಿಸ್ವಾರ್ಥಭಾವದಿಂದ ಈ ಎಲ್ಲವನ್ನೂ ಮಾಡದಿದ್ದರೆ, ಬಹುಷ: ಮನುಷ್ಯರ ಜೀವನವೇ (ಉತ್ಪತ್ತಿಯೇ) ಸಾಧ್ಯವಾಗಲಿಕ್ಕಿಲ್ಲ. ",
"Sanskrit": "यदि माता स्वस्य रक्त-मांसेभ्यः भागम् एकम् एकस्य नवजातकस्य निर्माणाय न त्यजति, प्रसववेदनां न सहते, नवजातकं दुग्धं न पाययति, पालन-पोषणादिषु आयासं न करोति, सर्वं निःस्वार्थभावेन नैव करोति, तर्हि मनुष्याणां जीवनं नैव सम्भवति।"
} |
{
"Hindi": "यागों का सामान्य परिचय यागों के सामान्यतः पांच प्रकार देखे जाते हैं- होम, इष्टि, पशु, सोम, और सत्र।",
"Kannada": "ಯಾಗವು ಸಾಮಾನ್ಯವಾಗಿ ಐದು ಪ್ರಕಾರವಾಗಿವೆ - ಹೋಮ, ಇಷ್ಟಿ, ಪಶು, ಸೋಮ, ಸತ್ರ ಎಂದು.",
"Sanskrit": "यागानां सामान्यतः पञ्च प्रकाराः दृश्यन्ते - होमः, इष्टिः, पशुः, सोमः, सत्रः च।"
} |
{
"Hindi": "वैदिक याग प्रकृति और विकृति के भेद से दो प्रकार के हैं।",
"Kannada": "ವೈದಿಕಯಾಗವು ಪ್ರಕೃತಿ ಮತ್ತು ವಿಕೃತಿ ಎಂದು ಎರಡು ಪ್ರಕಾರವಾಗಿದೆ.",
"Sanskrit": "वैदिकयागः प्रकृतिविकृतिभेदेन द्विविधः।"
} |
{
"Hindi": "प्रकृतियाग प्रधानयाग कहलाते हें।",
"Kannada": "ಪ್ರಕೃತಿಯಾಗವನ್ನು ಪ್ರಧಾನಯಾಗ ಎಂದು ಕರೆಯುವರು.",
"Sanskrit": "प्रकृतियागः प्रधानयागः इत्युच्यते।"
} |
{
"Hindi": "प्रत्येक प्रकृतियाग की बहुत सी विकृतियाँ हैं।",
"Kannada": "ಪ್ರತ್ಯೇಕ ಪ್ರಕೃತಿಯಾಗಗಳಿಗೆ ಅನೇಕ ವಿಕೃತಿಗಳಿವೆ.",
"Sanskrit": "प्रत्येकं प्रकृतियागस्य बह्व्यः विकृतयः सन्ति।"
} |
{
"Hindi": "समान जातीय यागों का मूल स्वरूप प्रकृति याग कहलाता है।",
"Kannada": "ಸಮಾನಜಾತೀಯ ಯಾಗಗಳ ಮೂಲಸ್ವರೂಪವನ್ನು ಪ್ರಕೃತಿಯಾಗ ಎಂದು ಕರೆಯುತ್ತಾರೆ.",
"Sanskrit": "समानजातीययागानां मूलं स्वरूपं प्रकृतिः यागः इत्युच्यते।"
} |
{
"Hindi": "उसी प्रकृतियाग के आश्रय में विकृतियाग अनुष्ठीत होते हैं।",
"Kannada": "ಇದೇ ಪ್ರಕೃತಿಯಾಗವನ್ನು ಆಶ್ರಯಿಸಿ ವಿಕೃತಿಯಾಗಗಳನ್ನು ಅನುಷ್ಠಾನ ಮಾಡುತ್ತಾರೆ.",
"Sanskrit": "तमेव प्रकृतियागम् आश्रित्य विकृतियागाः अनुष्ठीयन्ते।"
} |
{
"Hindi": "विकृतिया का दूसरा नाम अङऱगयाग है।",
"Kannada": "ವಿಕೃತಿಯಾಗದ ಇನ್ನೊಂದು ಹೆಸರು ಅಂಗಯಾಗ.",
"Sanskrit": "विकृतियागस्य अपरं नाम अङ्गयागः।"
} |
{
"Hindi": "प्रकृतियाग अगी है।",
"Kannada": "ಪ್ರಕೃತಿಯಾಗವು ಅಂಗೀ.",
"Sanskrit": "प्रकृतियागः अङ्गी।"
} |
{
"Hindi": "पांच प्रकार के प्रकृतियागों की प्रकृति यहाँ दिखाई गयी है।",
"Kannada": "ಐದು ವಿಧವಾದ ಪ್ರಕೃತಿಯಾಗಗಳ ಪ್ರಕೃತಿಯನ್ನು ಇಲ್ಲಿ ಪ್ರದರ್ಶಿಸುತ್ತಾರೆ.",
"Sanskrit": "पञ्चविधानां प्रकृतियागानां प्रकृतिः अत्र प्रदर्श्यते।"
} |
{
"Hindi": "होम याग दर्वीहोम कहलाता है।",
"Kannada": "ಹೋಮವನ್ನು, ಯಾಗವನ್ನು ದರ್ವೀಹೋಮವೆಂದು ಕರೆಯುತ್ತಾರೆ.",
"Sanskrit": "होमः यागः दर्वीहोमः इति कथ्यते।"
} |
{
"Hindi": "इस याग में प्रतिदिन प्रातः काल और सायंकाल गृहस्थ के अग्निकुण्ड में दूध, दही, पुरोडाश आदि की आहुति दी जाती है।",
"Kannada": "ಈ ಯಾಗದಲ್ಲಿ ಪ್ರತಿದಿನವೂ ಬೆಳಗ್ಗೆ ಮತ್ತು ಸಂಜೆ ಅಗ್ನಿಕುಂಡದಲ್ಲಿ ಹಾಲು, ಮೊಸರು, ಪುರೋಡಾಶ ಇತ್ಯಾದಿಗಳನ್ನು ಆಹುತಿ ನೀಡಲಾಗುತ್ತದೆ.",
"Sanskrit": "अस्मिन् यागे प्रतिदिनं प्रातःकाले सायंकाले च गृहस्थस्य अग्निकुण्डे दुग्धदधिपुरोडाशादीनां आहुतिः प्रदीयते।"
} |
{
"Hindi": "सूर्य और अग्नि इस होमयाग के देवता हैं।",
"Kannada": "ಸೂರ್ಯ ಮತ್ತು ಅಗ್ನಿಯು ಈ ಹೋಮಯಾಗದ ದೇವತೆಗಳು.",
"Sanskrit": "सूर्यः अग्निश्च अस्य होमयागस्य देवता।"
} |
{
"Hindi": "प्रातः सूर्य को तथा सायं को अग्नि उद्देश्य करके मन्त्रपाठ आहुति दी जाती है।",
"Kannada": "ಬೆಳಗ್ಗೆ ಸೂರ್ಯನನ್ನು ಉದ್ದೇಶಿಸಿ, ಸಂಜೆ ಅಗ್ನಿಯನ್ನು ಉದ್ದೇಶಿಸಿ ಮಂತ್ರಪಾಠ ಮತ್ತು ಆಹುತಿಯನ್ನು ನೀಡಲಾಗುತ್ತದೆ.",
"Sanskrit": "प्रातः सूर्यम् उद्दिश्य सायं च अग्निम् उद्दिश्य मन्त्रपाठः आहुतिश्च क्रियते।"
} |
{
"Hindi": "क्योंकि दर्वी के अग्निकुण्ड में आहुति दी जाती है।",
"Kannada": "ಏಕೆಂದರೆ, ದರ್ವಿಯ ಅಗ್ನಿಕುಂಡದಲ್ಲಿ ಆಹುತಿಯನ್ನು ನೀಡಲಾಗುವುದು.",
"Sanskrit": "यतः दर्व्या अग्निकुण्डे आहुतिः प्रदीयते।"
} |
{
"Hindi": "अतः इसे दर्वीहोम भी कहते हैं।",
"Kannada": "ಆದ್ದರಿಂದ ಇದನ್ನು ದರ್ವೀಹೋಮ ಎಂದೂ ಕರೆಯುವರು.",
"Sanskrit": "अतः अयं दर्वीहोमः इत्यपि उच्यते।"
} |
{
"Hindi": "होमजातीय यागों की प्रकृति अग्निहोत्र है।",
"Kannada": "ಹೋಮಜಾತೀಯ ಯಾಗಗಳ ಪ್ರಕೃತಿಯು ಅಗ್ನಿಹೋತ್ರವಾಗಿದೆ.",
"Sanskrit": "होमजातीययागानां प्रकृतिः अग्निहोत्रः।"
} |
{
"Hindi": "वैदिक काल में ब्राह्मण-क्षत्रिय-वैश्य के लिए प्रतिदिन अग्निहोत्र अनिवार्य था।",
"Kannada": "ವೈದಿಕ ಕಾಲದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಪ್ರತಿದಿನ ಅಗ್ನಿಹೋತ್ರವನ್ನು ಅನುಷ್ಠಾನ ಮಾಡಬೇಕಿತ್ತು.",
"Sanskrit": "वैदिककाले ब्राह्मण-क्षत्रिय-वैश्यैः प्रत्यहम् अग्निहोत्रम् अनुष्ठेयम् आसीत्।"
} |
{
"Hindi": "उनको स्वयं ही यह यज्ञ करना होता था, पुरोहित के द्वारा इसे करने की विधि नहीं थी।",
"Kannada": "ಅವರು ಸ್ವಯಂ ಈ ಕಾರ್ಯವನ್ನು ಮಾಡಬೇಕಿತ್ತು, ಪುರೋಹಿತರ ಮೂಲಕ ಅದನ್ನು ಮಾಡುವ ವಿಧಿಯು ಇಲ್ಲ.",
"Sanskrit": "तैः स्वयम् एव इदं करणीयम् आसीत्, पुरोहितद्वारा तत्करणस्य विधिः नासीत्।"
} |
{
"Hindi": "क्षत्रिय और वैश्य तो पुरोहित से करवाते थे।",
"Kannada": "ಕ್ಷತ್ರಿಯ ಮತ್ತು ವೈಶ್ಯನು ಪುರೋಹಿತನಿಂದ ಇದನ್ನು ಸಾಧಿಸುತ್ತಾರೆ.",
"Sanskrit": "क्षत्रियवैश्यौ तु पुरोहितेन इदं साधयतः स्म।"
} |
{
"Hindi": "लेकिन ब्राह्मण को प्रतिदिन स्वयं अग्निहोत्र करना होता था।",
"Kannada": "ಬ್ರಾಹ್ಮಣರು ಪ್ರತಿದಿನ ಅಗ್ನಿಹೋತ್ರವನ್ನು ಸ್ವಯಂ ಅನುಷ್ಠಾನ ಮಾಡಬೇಕಿತ್ತು.",
"Sanskrit": "ब्राह्मणैः तु प्रत्यहं स्वयम् अग्रिहोत्रम् अनुष्ठेयम् आसीत्।"
} |
{
"Hindi": "ब्राह्मण प्रतिदिन अग्निहोत्र करे “ब्राह्मणोऽहरहः अग्निहोत्रं जुहुयात्” यह श्रुति प्रमाण है।",
"Kannada": "ಬ್ರಾಹ್ಮಣರು ಪ್ರತಿದಿನ ಅಗ್ನಿಹೋತ್ರವನ್ನು ಅನುಷ್ಠಾನ ಮಾಡಬೇಕು, \"ಬ್ರಾಹ್ಮಣಃ ಅಹರಹಃ ಅಗ್ನಿಹೋತ್ರಂ ಜುಹುಯಾತ್\" ಎಂಬ ಶ್ರುತಿಯು ಪ್ರಮಾಣ.",
"Sanskrit": "ब्राह्मणः प्रत्यहम् अग्निहोत्रं कुर्यात् तत्र \"ब्राह्मणोऽहरहः अग्निहोत्रं जुहुयात्\" इति श्रुतिः प्रमाणम्।"
} |
{
"Hindi": "शतपथ ब्राह्मण की उक्ति है “एतद्वै जरामर्य॑सत्रं जरया ह्येवास्मात् मुच्यते मृत्युना वा” अर्थात् अग्रिहोत्र ही जरामर्यसत्र कहा जाता है।",
"Kannada": "ಶತಪಥಬ್ರಾಹ್ಣಣದ ವಚನವಿದೆ, \"ಏತದ್ವೈ ಜರಾಮರ್ಯಂ ಸತ್ರಂ ಜರಯಾ ಹ್ಯೋವಾಸ್ಮಾತ್ ಮುಚ್ಯತೇ ಮೃತ್ಯುನಾ ವಾ\" ಅರ್ಥಾತ್ ಅಗ್ನಿಹೋತ್ರವನ್ನೇ ಜರಾಮರ್ಯಸತ್ರ ಎನ್ನುತ್ತಾರೆ.",
"Sanskrit": "शतपथब्राह्मणस्य उक्तिः \"एतद्वै जरामर्यं सत्रं जरया ह्येवास्मात् मुच्यते मृत्युना वा\" अर्थात् अग्रिहोत्रमेव एव जरामर्यसत्रम् इत्युच्यते।"
} |
{
"Hindi": "इसी कारण मृत्यु के बीना इस याग के नित्यानुष्ठान से ब्राह्मण की निष्कृति नहीं है।",
"Kannada": "ಮೃತ್ಯುವನ್ನು ಹೊರತುಪಡಿಸಿ ಈ ಯಾಗದ ನಿತ್ಯಾನುಷ್ಟಾನದಿಂದ ಬ್ರಾಹ್ಮಣನ ನಿಷ್ಕೃತಿಯು ಇಲ್ಲದಿರುವುದೇ ಕಾರಣ.",
"Sanskrit": "कारणं हि मृत्युं विना अस्य यागस्य नित्यानुष्ठानात् ब्राह्मणस्य निष्कृतिः नास्ति।"
} |
{
"Hindi": "यह ब्राह्मण का नित्य कर्म है।",
"Kannada": "ಬ್ರಾಹ್ಮಣನಿಗೆ ಇದು ನಿತ್ಯಕರ್ಮ.",
"Sanskrit": "ब्राह्मणस्य इदं नित्यं कर्म।"
} |
{
"Hindi": "आज भी दाक्षिणात्य और महाराष्ट्र में बहुत से अग्निहोत्रकारी ब्राह्मण दिखते हैं।",
"Kannada": "ಈಗಲೂ ದಾಕ್ಷಿಣಾತ್ಯದಲ್ಲಿ ಮಹಾರಾಷ್ಟ್ರದಲ್ಲಿ ಅನೇಕ ಅಗ್ನಿಹೋತ್ರಿಗಳಾದ ಬ್ರಾಹ್ಮಣರನ್ನು ಕಾಣಬಹುದು.",
"Sanskrit": "अद्यापि दाक्षिणात्ये महाराष्ट्रे च बहवः अग्निहोत्रकर्तारः ब्राह्मणाः दृश्यन्ते।"
} |
{
"Hindi": "इस याग में प्रातः सूर्य तथा सायं अग्नि को उद्दे्य मानकर आहुति दी जाती है।",
"Kannada": "ಈ ಯಾಗದಲ್ಲಿ ಬೆಳಗ್ಗೆ ಸೂರ್ಯನನ್ನು ಉದ್ದೇಶಿಸಿ ಮತ್ತು ಸಂಜೆ ಅಗ್ನಿಯನ್ನು ಉದ್ದೇಶಿಸಿ ಆಹುತಿಯನ್ನು ನೀಡಲಾಗುತ್ತದೆ.",
"Sanskrit": "अस्मिन् यागे प्रातः सूर्यमुद्दिश्य सायं च अग्निमुद्दिश्य आहुतिः प्रदीयते।"
} |
{
"Hindi": "एक ही मन्त्र प्रातः और सायं दोनों समय पढ़ा जाता है।",
"Kannada": "ಒಂದೇ ಮಂತ್ರವನ್ನು ಬೆಳಗ್ಗೆ ಮತ್ತು ಸಂಜೆ ಪಠಿಸಲಾಗುತ್ತದೆ.",
"Sanskrit": "एक एव मन्त्रः प्रातः सायं च पठ्यते।"
} |
{
"Hindi": "प्रातः केवल “सूर्यो ज्योतिर्ज्योतिः सूर्यः” तथा सायं सूर्य शब्द के स्थान पर अग्नि शब्द का प्रयोग करके “अग्निर्ज्योतिः ज्योतिरग्निः'” ऐसा पढ़ा जाता है।",
"Kannada": "ಬೆಳಗ್ಗೆ ಕೇವಲ \"ಸೂರ್ಯೋ ಜ್ಯೋತಿರ್ಜೋತಿಃ ಸೂರ್ಯಃ\" ಎಂದು, ಸಂಜೆ ಸೂರ್ಯಶಬ್ದದ ಸ್ಥಾನದಲ್ಲಿ ಅಗ್ನಿಪದವನ್ನು ಬಳಸಿ \"ಅಗ್ನಿರ್ಜೋತಿಃ ಜ್ಯೋತಿರಗ್ನಿಃ\" ಎಂದು ಪಠಿಸಲಾಗುತ್ತದೆ.",
"Sanskrit": "प्रातः केवलं \"सूर्यो ज्योतिर्ज्योतिः सूर्यः\" इति, सायं च सूर्यशब्दस्य स्थाने अग्निशब्दं प्रयुज्य \"अग्निर्ज्योतिः ज्योतिरग्निः\" इति पठ्यते।"
} |
{
"Hindi": "सायंकाल में सूर्य उसका तेज अग्नि में प्रतिष्ठापित करके अस्त हो जाता है, अतः सूर्य के स्थान पर अग्नि का पाठ विहित है।",
"Kannada": "ಸಾಯಂಕಾಲದಲ್ಲಿ ಸೂರ್ಯನು ತನ್ನ ತೇಜಸ್ಸನ್ನು ಅಗ್ನಿಯಲ್ಲಿ ಪ್ರತಿಷ್ಠಾಪಿಸಿ ಅಸ್ತನಾಗುತ್ತಾನೆ, ಆದ್ದರಿಂದ ಸೂರ್ಯನ ಸ್ಥಾನದಲ್ಲಿ ಅಗ್ನಿಯ ಪಾಠವನ್ನು ವಿಧಾನಮಾಡಲಾಗಿದೆ.",
"Sanskrit": "सायंकाले सूर्यः तस्य तेजः अग्नौ प्रतिष्ठाप्य अस्तं गच्छति, अतः सूर्यस्य स्थाने अग्नेः पाठः विहितः।"
} |
{
"Hindi": "प्रातःकालीन आहुति सूर्योदय से पूर्व तथा, सायंकालीन आहुति सूर्य क॑ अस्तगमन के बाद देनी चाहिए इस विषय में ब्राह्मण ग्रन्थों में ऐसा विचार है।",
"Kannada": "ಸೂರ್ಯೋದಯಕ್ಕಿಂತ ಮುಂಚೆ ಬೆಳಗಿನ ಆಹುತಿ, ಆದರೆ ಸಾಯಂಕಾಲೀನ ಆಹುತಿಯನ್ನು ಸೂರ್ಯಾಸ್ತದ ನಂತರ ನೀಡಬೇಕು ಎಂಬ ವಿಷಯದಲ್ಲಿ ಬ್ರಾಹ್ಮಣಗ್ರಂಥದಲ್ಲಿ ವಿಚಾರ ಮಾಡಲಾಗಿದೆ.",
"Sanskrit": "प्रातःकालीना आहुतिः सूर्योदयात् पूर्वम्, किञ्च सायंकालीना आहुतिः सूर्यस्य अस्तगमनात् परं विधेया इति विषये ब्राह्मणग्रन्थे विचारः विद्यते।"
} |
{
"Hindi": "एक पक्ष में प्रातः सूर्योदय से पूर्व होम का विधान है, उनके मत में यदि ऐसा नहीं करते तो आदित्य आहुति को स्वीकार नहीं करता है।",
"Kannada": "ಒಂದು ಮತದಂತೆ ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು ಹೋಮ ಮಾಡಬೇಕು, ಅವರ ಪ್ರಕಾರ ಹಾಗೆ ಮಾಡದಿದ್ದಲ್ಲಿ ಆದಿತ್ಯನು ಅದನ್ನು ಸ್ವೀಕರಿಸುವುದಿಲ್ಲ.",
"Sanskrit": "एकस्मिन् पक्षे प्रातः सूर्योदयात् प्राक् होमः विधेयः, तेषां नये तथा न क्रियते चेत् आदित्यः आहुतिं न स्वीकरोति।"
} |
{
"Hindi": "सूअर उस आहुति को स्वीकार करता है।",
"Kannada": "ವರಾಹವು ಆ ಆಹುತಿಯನ್ನು ಸ್ವೀಕರಿಸುತ್ತದೆ.",
"Sanskrit": "शूकरः तामाहुतिं स्वीकरोति।"
} |
{
"Hindi": "दूसरे पक्ष में इसके विपरीत मतं प्रदर्शित किया गया है।",
"Kannada": "ಮತ್ತೊಂದು ವಿಚಾರದಲ್ಲಿ ವಿರುದ್ಧವಾದ ವಾದವನ್ನು ಪ್ರದರ್ಶಿಸುತ್ತಾರೆ.",
"Sanskrit": "अपरस्मिन् पक्षे विपरीतं मतं प्रदर्श्यते।"
} |
{
"Hindi": "सूर्योदय होने पर आहुति का दान निष्फल होता है।",
"Kannada": "ಸೂರ್ಯೋದಯವಾಗದಿದ್ದರೆ ಆಹುತಿಯು ನಿಷ್ಫಲವಾಗುವುದು.",
"Sanskrit": "असति सूर्योदये आहुतिदानं निष्फलं भवति।"
} |
{
"Hindi": "इस प्रकार दोनों पक्षों के मतानुसार आहुति प्रदान करनी होती है।",
"Kannada": "ಹೀಗೆಯೇ ಎರಡೂ ಪ್ರಕಾರಗಳ ವಿಚಾರವಾಗಿ ಆಹುತಿಯನ್ನು ಪ್ರದಾನ ಮಾಡಬೇಕು.",
"Sanskrit": "एवमेव पक्षद्वयस्य मतानुसारम् आहुतिप्रदानं कर्तव्यं भवति।"
} |
{
"Hindi": "श्रौत सूत्र में इस विवाद का समाधान विहित है।",
"Kannada": "ಶ್ರೌತಸೂತ್ರದಲ್ಲಿ ಈ ವಿವಾದದ ಸಮಾಧಾನವನ್ನು ಹೇಳುತ್ತಾರೆ.",
"Sanskrit": "श्रौतसूत्रैः अस्य विवादस्य समाधानं विहितम् अस्ति।"
} |
{
"Hindi": "वेद के शाखा भेद के अनुसार ही आहुति के समय का भी भेद किया गया है।",
"Kannada": "ವೇದದ ಶಾಖಾಭೇದಾನುಸಾರವಾಗಿ ಆಹುತಿಯ ಸಮಯದ ಭೇದವನ್ನು ಮಾಡಲಾಗಿದೆ.",
"Sanskrit": "वेदस्य शाखाभेदानुसारम् आहुतेः समयस्य भेदः कृतः वर्तते।"
} |
{
"Hindi": "जैसे- बह्वृच-छन्दोमय शाखा के द्विजातिगण सूर्योदय से पूर्व होम करें।",
"Kannada": "ಉದಾಹರಣೆಗೆ - ಬಹ್ವೃಚ-ಛಂದೋಮಯ ಶಾಖದ ದ್ವಿಜಾತಿಗಣಗಳು ಸೂರ್ಯೋದಯಕ್ಕಿಂತ ಮೊದಲು ಹೋಮವನ್ನು ಮಾಡುವುದು.",
"Sanskrit": "यथा बह्वृच्-छन्दोमयशाखयोः द्विजातिगणाः सूर्योदयात् पूर्वं होमं कुर्युः।"
} |
{
"Hindi": "इस कारण वे अनुदित होमी कहलाते हैं।",
"Kannada": "ಆ ಕಾರಣದಿಂದ ಅವರನ್ನು ಅನುದಿತಹೋಮಿ ಎನ್ನುವರು.",
"Sanskrit": "तत्कारणात् ते अनुदितहोमिनः इत्युच्यन्ते।"
} |
{
"Hindi": "दूसरी जगह कठ-तैत्तरीय-मैत्रायण शाखा के ब्राह्मण उदय के बाद में ही होम करें ऐसा विधान हेै।",
"Kannada": "ಇನ್ನೊಂದೆಡೆ ಕಠ-ತೈತ್ತಿರೀಯ-ಮೈತ್ರಾಯಣಶಾಖೆಯಲ್ಲಿ ಬ್ರಾಹ್ಮಣದ ಉದಯವಾದ ನಂತರವೇ ಹೋಮವನ್ನು ಮಾಡಬೇಕು.",
"Sanskrit": "अपरत्र कठ-तैत्तिरीय-मैत्रायणशाखानां ब्राह्मणाः उदयात् परमेव होमं कुर्युः।"
} |
{
"Hindi": "इसलिए वे उदित होमी कहलाते हैं।",
"Kannada": "ಆದ್ದರಿಂದ ಅವರನ್ನು ಉದಿತಹೋಮೀ ಎನ್ನುವರು.",
"Sanskrit": "तस्मात् ते उदितहोमिनः उच्यन्ते ।"
} |
{
"Hindi": "किन्तु दोनों ही सूर्योदय से पूर्व ही गार्ह पत्याग्नि का चयन करके होम कुण्ड का प्रज्वालन करें।",
"Kannada": "ಆದರೆ ಎರಡರಲ್ಲಿಯೂ ಕೂಡ ಸೂರ್ಯೋದಯಕ್ಕಿಂತ ಪೂರ್ವದಲ್ಲಿ ಗಾರ್ಹಪತ್ಯಾಗ್ನಿಯ ಚಯನವನ್ನು ಮಾಡಿ ಹೋಮಕುಂಡದ ಪ್ರಜ್ವಾಲನೆಯನ್ನು ಮಾಡಬೇಕು.",
"Sanskrit": "किन्तु उभाभ्याम् एव सूर्योदयात् पूर्वमेव गार्हपत्याग्नेः चयनं कृत्वा होमकुण्डस्य प्रज्वालनं कर्तव्यम्|"
} |
{
"Hindi": "अग्निहोत्र का प्रधान आहुति द्रव्य दुग्ध है, इसलिए यजमान एक गाय का पालन करता है।",
"Kannada": "ಅಗ್ನಿಹೋತ್ರದ ಪ್ರಧಾನ ಆಹುತಿದ್ರವ್ಯವೇ ಕ್ಷೀರ, ಆದ್ದರಿಂದ ಯಜಮಾನನು ಒಂದು ಗೋವನ್ನು ಪಾಲನೆ ಮಾಡಬೇಕು.",
"Sanskrit": "अग्निहोत्रस्य प्रधानम् आहुतिद्रव्यं हि दुग्धम्, तस्मात् यजमानेन पृथग् एका गौः पालनीया।"
} |
{
"Hindi": "वह अग्निहोत्री गाय कहलाती है।",
"Kannada": "ಆ ಅಗ್ನಿಹೋತ್ರಿಯನ್ನು ಗೋವು ಎನ್ನಲಾಗಿದೆ.",
"Sanskrit": "सा अग्निहोत्री गौरित्युच्यते।"
} |
{
"Hindi": "यज्ञवेत्ता मृदा के एक पात्र से दुग्ध गर्म करता है।",
"Kannada": "ಯಜ್ಞವೇದಿಯಲ್ಲಿ ಮೃತ್ಪಾತ್ರೆಯೊಂದರಲ್ಲಿ ಹಾಲನ್ನು ಕಾಯಿಸಲಾಗುತ್ತದೆ.",
"Sanskrit": "यज्ञवेद्यां मृत्पात्रेण एकेन दुग्धम् उष्णीक्रियते।"
} |
{
"Hindi": "वह उष्ण दूध अग्निहोत्रवनी इस नाम से दर्वय अग्नि में आहूत किया जाता है।",
"Kannada": "ಆ ಉಷ್ಣವಾದ ಹಾಲು ಅಗ್ನಿಹೋತ್ರವನೀ ಎಂಬ ಹೆಸರಿನಿಂದ ದರ್ವಿಯಿಂದ ಅಗ್ನಿಯನ್ನು ಆಹ್ವಾನಿಸಲಾಗುವುದು.",
"Sanskrit": "तच्च उष्णं दुग्धम् अग्निहोत्रवनी इति नामिकया दर्व्या अग्नौ आहूयते।"
} |
{
"Hindi": "प्रातः दो आहुति एक सूर्य, और दूसरी प्रजापति को उद्दे्य करके दी जाती है।",
"Kannada": "ಪ್ರಾತಃ ಎರಡು ಆಹುತಿಗಳ ಮಧ್ಯದಲ್ಲಿ ಸೂರ್ಯ ಮತ್ತು ಪ್ರಜಾಪತಿಯನ್ನು ಉದ್ದೇಶಿಸಿ ನೀಡಲಾಗುವುದು.",
"Sanskrit": "प्रातः आहुतिद्वयोः मध्ये एका सूर्याय, अपरा च प्रजापतिम् उद्दिश्य प्रदीयते।"
} |
{
"Hindi": "जिस दिन अग्निहोत्र आरम्भ किया जाता है।",
"Kannada": "ಯಾವ ದಿನದಲ್ಲಿ ಅಗ್ನಿಹೋತ್ರವನ್ನು ಆರಂಭಿಸಲಾಗುವುದು.",
"Sanskrit": "यस्मिन् दिवसे अग्निहोत्रम् आरभ्यते।"
} |
{
"Hindi": "उसी दिन सायंकाल में भी अग्निहोत्र करना होता है।",
"Kannada": "ಆ ದಿನ ಸಾಯಂಕಾಲದಲ್ಲಿ ಅಗ್ನಿಹೋತ್ರವನ್ನು ಮಾಡಬೇಕು.",
"Sanskrit": "तस्मिन् दिवसे सायंकाले अग्निहोत्रं करणीयं भवति।"
} |
{
"Hindi": "उसी कारण यह अग्निहोत्र नाम से प्रसिद्ध होता है स्तम्भ श्रौत सूत्र के मत में।",
"Kannada": "ಇದೇ ಕಾರಣದಿಂದ ಇದು ಆಪಸ್ತಂಭದ ಶ್ರೌತಸೂತ್ರದಲ್ಲಿ ಅಗ್ನಿಹೋತ್ರಂ ಎಂದು ಪ್ರಸಿದ್ಧವಾಗಿದೆ. ",
"Sanskrit": "तस्मात् कारणात् इदम् अग्निहोत्रम् इति प्रसिद्धिः आपस्तम्भस्य श्रौतसूत्रमते।"
} |
{
"Hindi": "पहले ही कहा गया है कि ब्राह्मण को स्वयम् ही यह करना होता है।",
"Kannada": "ಮೊದಲೇ ಹೇಳಿದಂತೆ ಬ್ರಾಹ್ಮಣನೇ ಸ್ವತ: ಇದನ್ನು ಮಾಡಬೇಕು.",
"Sanskrit": "पूर्वमेव उक्तं यत् ब्राह्मणेन स्वयमेव इदं कर्तव्यम्।"
} |
{
"Hindi": "यदि ब्राह्मण अस्वास्थ्य के कारण अक्षम हो तो वह कार्य उसके पुत्र को, और पुत्राभाव में पुरोहित करे।",
"Kannada": "ಒಂದು ವೇಳೆ ಬ್ರಾಹ್ಮಣನಿಗೆ ಅನಾರೋಗ್ಯವಿದ್ದು ಮಾಡಲು ಸಾಧ್ಯವಾಗದಿದ್ದರೆ, ಆಗ ಆ ಕಾರ್ಯವನ್ನು ಅವನ ಮಗನು, ಮಗನಿಲ್ಲದಿದ್ದಲ್ಲಿ ಪುರೋಹಿತನೂ ಮಾಡಬೇಕಾಗುತ್ತದೆ.",
"Sanskrit": "यदि ब्राह्मणः अस्वास्थ्यकारणात् अक्षमः भवति तदा तत्कार्यं पुत्रेण, पुत्राभावे च पुरोहितेन कर्तव्यं भवति।"
} |
{
"Hindi": "किन्तु पूर्णिमा तथा अमावास्या पर अस्वस्थ होते हुए भी ब्राह्मण को ही करना चाहिए।",
"Kannada": "ಆದರೆ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನ ಅಸ್ವಸ್ಥನಾಗಿದ್ದರೂ ಬ್ರಾಹ್ಮಣನೇ ಮಾಡಬೇಕಾಗುತ್ತದೆ.",
"Sanskrit": "किन्तु पूर्णिमायाम् अमावास्यायाञ्च अस्वस्थतासत्त्वे अपि ब्राह्मणेनैव करणीयं भवति।"
} |
{
"Hindi": "अविवाहित को अग्निहोत्र का अधिकार नहीं है।",
"Kannada": "ಅವಿವಾಹಿತನಿಗೆ ಅಗ್ನಿಹೋತ್ರದಲ್ಲಿ ಅಧಿಕಾರವಿಲ್ಲ.",
"Sanskrit": "अविवाहितस्य अग्निहोत्रे अधिकारः नास्ति।"
} |
{
"Hindi": "विवाहित है किन्तु जो विपत्नीक हो गया, उसको भी अधिकार नहीं है।",
"Kannada": "ವಿವಾಹಿತನಾಗಿದ್ದರೂ ವಿಪತ್ನೀಕನಾಗಿದ್ದರೆ ಅವನಿಗೆ ಅಧಿಕಾರವಿರುವುದಿಲ್ಲ.",
"Sanskrit": "विवाहितः किन्तु विपत्नीकः जातः, तस्यापि अधिकारः नास्ति।"
} |
{
"Hindi": "अतः पुनर्विवाह करना होता है।",
"Kannada": "ಅವನು ಮತ್ತೆ ವಿವಾಹವಾಗಬೇಕಾಗುತ್ತದೆ.",
"Sanskrit": "तेन पुनः दारपरिग्रहः कर्तव्यो भवति।"
} |
{
"Hindi": "ऐतरेयब्राह्मण में लिखा है कि यदि उसकी पत्नी मर चुकी है तो पुनर्विवाह करना चाहिए अथवा श्रद्धा को पत्नी रूप में कल्पित करके ब्राह्मण अग्निहोत्र करे।",
"Kannada": "ಒಮ್ಮೆ ಪತ್ನಿ ತೀರಿಕೊಂಡಿದ್ದರೆ ಅವನು ಮತ್ತೆ ಮದುವೆಯಾಗೇಕೆಂದು ಐತರೇಯ ಬ್ರಾಹ್ಮಣದಲ್ಲಿ ಬರೆಯಲ್ಪಟ್ಟಿದೆ, ಅಥವಾ ಶ್ರದ್ಧೆಯನ್ನು ಪತ್ನಿಯ ರೂಪದಲ್ಲಿ ಕಲ್ಪಿಸಿಕೊಂಡು ಅಗ್ನಿಹೋತ್ರವನ್ನು ಮಾಡಬೇಕಾಗುತ್ತದೆ.",
"Sanskrit": "ऐतरेयब्राह्मणे लिखितमस्ति यद् यदि पत्नी विगता स्यात् तर्हि पुनः विवाहः कार्यः नो चेत् श्रद्धां पत्नीरूपेण कल्पयित्वा ब्राह्मणः अग्निहोत्रं कुर्यात् इति।"
} |
{
"Hindi": "होमयाग का दूसरा नाम क्या है?",
"Kannada": "ಹೋಮಯಾಗದ ಇನ್ನೊಂದು ಹೆಸರೇನು?",
"Sanskrit": "होमयागस्य अपरं नाम किम् ?"
} |
{
"Hindi": "होमयाग की प्रकृति क्या है?",
"Kannada": "ಹೋಮಯಾಗದ ಪ್ರಕೃತಿ ಯಾವುದು?",
"Sanskrit": "होमयागस्य प्रकृतिः का ?"
} |
{
"Hindi": "किनके लिए अग्निहोत्र आवश्यक था?",
"Kannada": "ಯಾರಿಗೆ ಅಗ್ನಿಹೋತ್ರವು ಆವಶ್ಯಕವಾಗಿತ್ತು?",
"Sanskrit": "केषां कृते अग्निहोत्रम् आवश्यकम् आसीत् ?"
} |
{
"Hindi": "विपत्नीक अग्निहोत्री क्या करे?",
"Kannada": "ವಿಪತ್ನೀಕನಾದ ಅಗ್ನಿಹೋತ್ರನು ಏನು ಮಾಡಬೇಕು?",
"Sanskrit": "विपत्नीकः अग्निहोत्री किं कुर्यात् ?"
} |
{
"Hindi": "इष्टि याग की प्रकृति दर्श पूर्णमास है।",
"Kannada": "ದರ್ಶಪೂರ್ಣಮಾಸವು ಇಷ್ಟಿಯಾಗದ ಪ್ರಕೃತಿಯಾಗಿದೆ.",
"Sanskrit": "इष्टियागस्य प्रकृतिः भवति दर्शपूर्णमासः।"
} |
{
"Hindi": "दर्शशब्द का अर्थ सूर्यन्द सङ्गम अर्थात् अमावस्या है।",
"Kannada": "ದರ್ಶಶಬ್ದದ ಅರ್ಥ ಸೂರ್ಯಚಂದ್ರರ ಸಮಾಗಮ ಅಂದರೆ ಅಮಾವಾಸ್ಯೆ.",
"Sanskrit": "दर्शशब्दस्य अर्थः सूर्येन्दुसङ्गमः अर्थात् अमावस्या।"
} |
{
"Hindi": "पौर्णमासी अर्थात् पूर्णिमा।",
"Kannada": "ಪೌರ್ಣಮಾಸೀ ಎಂದರೆ ಪೂರ್ಣಿಮೆ.",
"Sanskrit": "पौर्णमासी अर्थात् पूर्णिमा।"
} |
{
"Hindi": "यह यज्ञ पूर्णिमा और अमावास्या को किया जाता है।",
"Kannada": "ಈ ಯಾಗವನ್ನು ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಮಾಡಬೇಕು.",
"Sanskrit": "पूर्णिमायाम् अमावास्यायाञ्च अयं यागः क्रियते।"
} |
{
"Hindi": "विवाहित, सस्त्रीक आहिताग्नि ब्राह्मण तथा क्षत्रिय अथवा शूद्र भी इस याग के अधिकारी हैं।",
"Kannada": "ವಿವಾಹಿತನಾದ, ಸಪತ್ನೀಕನಾದ, ಆಹಿತಾಗ್ನಿಯಾದ ಬ್ರಾಹ್ಮಣ, ಕ್ಷತ್ರಿಯ ಅಥವಾ ಶೂದ್ರನು ಈ ಯಾಗದ ಅಧಿಕಾರಿಯು.",
"Sanskrit": "विवाहितः, सपत्नीकः, आहिताग्निः ब्राह्मणः क्षत्रियो वा शूद्रो वा अस्य यागस्य अधिकारी।"
} |
{
"Hindi": "आहिताग्नि शब्द का अर्थ जिसने गार्ह पत्याग्नि को प्रतिष्ठित किया है।",
"Kannada": "ಆಹಿತಾಗ್ನಿ ಶಬ್ದದ ಅರ್ಥವೆಂದರೆ ಯಾರಿಂದ ಗಾರ್ಹಪತ್ಯಾಗ್ನಿಯು ಪ್ರತಿಷ್ಠಾಪಿಸಲ್ಪಟ್ಟಿದೆಯೋ ಅವನು. ",
"Sanskrit": "आहिताग्निशब्दस्य अर्थो हि येन गार्हपत्याग्निः प्रतिष्ठितो वर्तते।"
} |
{
"Hindi": "अमावास्या पर दो दिन तथा पूर्णिमा पर दो दिन इस याग का अनुष्ठान करना चाहिए।",
"Kannada": "ಅಮಾವಾಸ್ಯೆಯ ಎರಡು ದಿನ ಮತ್ತು ಹುಣ್ಣಿಮೆಯ ಎರಡು ದಿನ ಈ ಯಾಗದ ಅನುಷ್ಠಾನವನ್ನು ಮಾಡಬೇಕು.",
"Sanskrit": "अमावास्यायां दिनद्वयं पूर्णिमायां च दिनद्वयम् अस्य यागस्य अनुष्ठानं कर्तव्यम्।"
} |
{
"Hindi": "यह याग पूर्णिमा की प्रातः आरम्भ होता है तथा दुसरे दिन अर्थात् प्रतिपदा के मध्याह्न में समाप्त होता है।",
"Kannada": "ಈ ಯಾಗವು ಹುಣ್ಣಿಮೆಯ ದಿನ ಬೆಳಿಗ್ಗೆ ಪ್ರಾರಂಭವಾಗಿ ಮರುದಿನ ಅಂದರೆ ಪಾಡ್ಯದ ದಿನ ಮಧ್ಯಾಹ್ನದಂದು ಮುಗಿಯುತ್ತದೆ.",
"Sanskrit": "अयं यागः पूर्णिमायां प्रातः आरभ्य परस्मिन् दिवसे अर्थात् प्रतिपदि मध्याह्णे समाप्तो भवति।"
} |
{
"Hindi": "अमावास्या पर भी इसी प्रकार का अनुष्ठान विहित है।",
"Kannada": "ಅಮಾವಾಸ್ಯೆಯ ದಿನವೂ ಕೂಡ ಇದೇ ರೀತಿಯ ಅನುಷ್ಠಾನವು ವಿಹಿತವಾಗಿದೆ.",
"Sanskrit": "अमावास्यायामपि एवमेव अनुष्ठानं विहितम्।"
} |
{
"Hindi": "इस याग का प्रथम दिवस पूर्णिमा हो।",
"Kannada": "ಈ ಯಾಗದ ಪ್ರಥಮ ದಿನವು ಹುಣ್ಣಿಮೆಯಾಗಿರಬೇಕು.",
"Sanskrit": "अस्य यागस्य प्रथमदिनं पूर्णिमा भवेत्।"
} |
{
"Hindi": "अर्थात् अमावास्या पर इसका आरम्भ न करें।",
"Kannada": "ಅಂದರೆ ಅಮಾವಾಸ್ಯೆಯಂದು ಪ್ರಾರಂಭವಾಗಕೂಡದು.",
"Sanskrit": "अर्थात् अमावास्यायाम् आरम्भो न भवेत्।"
} |
{
"Hindi": "इस याग में चार पुरोहित होते हैं - होता, अधवर्यु, अग्नीश्र, और ब्रह्मा।",
"Kannada": "ಈ ಯಾಗದಲ್ಲಿ ನಾಲ್ವರು ಪುರೋಹಿತರು ಅಪೇಕ್ಷಿತರು-ಹೋತಾ, ಅಧ್ವರ್ಯು, ಅಗ್ನೀಧ್ರ ಮತ್ತು ಬ್ರಹ್ಮ.",
"Sanskrit": "अस्मिन् यागे चत्वारः पुरोहिताः अपेक्षन्ते - होता, अध्वर्युः, अग्नीध्रः,ब्रह्मा चेति।"
} |
{
"Hindi": "पुरोहितों में तारतम्य नहीं है।",
"Kannada": "ಪುರೋಹಿತರಲ್ಲಿ ತಾರತಮ್ಯವಿಲ್ಲ.",
"Sanskrit": "पुरोहितेषु तारतम्यं नास्ति।"
} |
{
"Hindi": "सोमयाग में ब्रह्मा सर्वश्रेष्ठ होता है।",
"Kannada": "ಸೋಮಯಾಗದಲ್ಲಿ ಬ್ರಹ್ಮನು ಸರ್ವಶ್ರೇಷ್ಠನು.",
"Sanskrit": "सोमयागे ब्रह्मा सर्वश्रेष्ठः भवति।"
} |
{
"Hindi": "सभी उसके प्रति सम्मान प्रदर्शित करते हैं।",
"Kannada": "ಎಲ್ಲರೂ ಅವನಿಗೆ ಗೌರವವನ್ನು ತೋರಿಸುತ್ತಾರೆ.",
"Sanskrit": "सर्वे तं प्रति सम्मानं प्रदर्शयन्ति।"
} |
{
"Hindi": "किन्तु इष्टियाग में सभी पुरोहितों का अधिकार समान होता है।",
"Kannada": "ಆದರೆ ಇಷ್ಟಿಯಾಗದಲ್ಲಿ ಎಲ್ಲ ಪುರೋಹಿತರ ಅಧಿಕಾರ ಸಮಾನವಾಗಿರುತ್ತದೆ.",
"Sanskrit": "किन्तु इष्टियागे सर्वेषां पुरोहितानाम् अधिकारः समानो वर्तते।"
} |
{
"Hindi": "यद्यपि विविध गौण आहुतियाँ तथा देवताओं के नाम इष्टियाग में होते हैं, तथापि उसमें आहुति ही मुख्य होती है।",
"Kannada": "ವಿವಿಧ ಗೌಣಾಹುತಿಗಳು ಮತ್ತು ದೇವತೆಗಳ ಹೆಸರುಗಳು ಇಷ್ಟಿಯಾಗದಲ್ಲಿ ಕೇಳಲ್ಪಟ್ಟರೂ ಇಲ್ಲಿ ಆಹುತಿಯೇ ಮುಖ್ಯವಾಗಿರುತ್ತದೆ.",
"Sanskrit": "यद्यपि विविधाः गौणाहुतयः देवतानामानि च इष्टियागे श्रूयन्ते, तथापि तत्र आहुतिरेव मुख्या।"
} |
{
"Hindi": "पहली आहुति अग्नि को उद्देश्य करके पुरोडाश की दी जाती है।",
"Kannada": "ಮೊದಲನೆಯ ಆಹುತಿಯಲ್ಲಿ ಅಗ್ನಿಯನ್ನು ಕುರಿತು ಪುರೋಡಾಶವು ನೀಡಲ್ಪಡುತ್ತದೆ. ",
"Sanskrit": "प्रथमायाम् आहुतौ अग्निम् उद्दिश्य पुरोडाशः प्रदीयते।"
} |
{
"Hindi": "दूसरी आहुति उपांशु के रूप में प्रसिद्ध है।",
"Kannada": "ಎರಡನೆಯ ಆಹುತಿಯು ಉಪಾಂಶುರೂಪದಿಂದ ಪ್ರಸಿದ್ಧವಾಗಿದೆ.",
"Sanskrit": "द्वितीया आहुतिः उपांशुरूपेण प्रसिद्धा।"
} |
{
"Hindi": "वह विष्णु-प्रजापति-अग्नि-सोम आदि के लिए निवेदन की जाती है।",
"Kannada": "ಅದು ವಿಷ್ಣು-ಪ್ರಜಾಪತಿ-ಅಗ್ನಿ ಮತ್ತು ಸೋಮ(ಚಂದ್ರ)ರಿಗಾಗಿ ಇರುತ್ತದೆ.",
"Sanskrit": "सा च विष्णु-प्रजापति-अग्नि-सोमानां कृते निवेद्यते।"
} |
{
"Hindi": "तीसरी आहुति अग्नि और सोम को उद्देश्य करके पुरोडाश को अर्पित की जाती है।",
"Kannada": "ಮೂರನೆಯ ಆಹುತಿಯಲ್ಲಿ ಅಗ್ನಿ ಮತ್ತು ಸೋಮರನ್ನು ಕುರಿತು ಪುರೋಡಾಶವು ಅರ್ಪಿಸಲ್ಪಡುತ್ತದೆ.",
"Sanskrit": "तृतीयाहुतौ अग्नीषोमौ उद्दिश्य पुरोडाशः अर्प्यते।"
} |
{
"Hindi": "अमावस्या पर तो पुरोडाश निष्ठ पहली आहुति अग्नि के लिए इष्ट होती है।",
"Kannada": "ಅಮಾವಾಸ್ಯೆಯಲ್ಲಿ ಪುರೋಡಾಶನಿಷ್ಠವಾದ ಪ್ರಥಮಾಹುತಿಯು ಅಗ್ನಿಗೆ ಇಷ್ಟವಾಗುತ್ತದೆ.",
"Sanskrit": "अमावस्यायां तु पुरोडाशनिष्ठा प्रथमाहुतिः अग्नेः इष्टा भवति।"
} |
{
"Hindi": "और दूसरी आदि आहुतियों का देवता इन्द्र होता है।",
"Kannada": "ದ್ವಿತೀಯಾದಿಗಳಲ್ಲಿ ಆಹುತಿಯ ದೇವತೆಯು ಇಂದ್ರನಾಗುತ್ತಾನೆ.",
"Sanskrit": "द्वितीयादिषु च आहुतेः देवता भवति इन्द्रः।"
} |
{
"Hindi": "और हव्य द्रव्य यथा क्रम दही और दृध हैं।",
"Kannada": "ಹವ್ಯದ್ರವ್ಯವು ಯಥಾಕ್ರಮವಾಗಿ ಮೊಸರು ಮತ್ತು ಕ್ಷೀರ.",
"Sanskrit": "हव्यद्रव्यं च यथाक्रमं दधि दुग्धं च।"
} |
{
"Hindi": "इष्टियाग की समाप्ति पर अग्नि स्विष्टकृत् आहुति अग्नि के लिए अर्पित की जाती है।",
"Kannada": "ಇಷ್ಟಿಯಾಗದ ಸಮಾಪ್ತಿಯಲ್ಲಿ ಅಗ್ನಿಸ್ವಿಷ್ಟಕೃತ್ ಹೆಸರಿನ ಆಹುತಿಯನ್ನು ಅಗ್ನಿಗೆ ಅರ್ಪಿಸಲಾಗುವುದು.",
"Sanskrit": "इष्टियागस्य समाप्तौ अग्निस्विष्टकृन्नामिका आहुतिः अग्नये अर्प्यते।"
} |
{
"Hindi": "इसके बाद पुरोहित यज्ञ की आहुति का अवशिष्ट अंश प्रसाद के रूप में ग्रहण करते है, और वह ईडा भक्षण कहलाता है।",
"Kannada": "ತದನಂತರ, ಪುರೋಹಿತರು ಯಜ್ಞಾಹುತಿಯ ಅವಶಿಷ್ಟ ಅಂಶವನ್ನು ಪ್ರಸಾದರೂಪವಾಗಿ ಸ್ವೀಕರಿಸುತ್ತಾರೆ, ಅದನ್ನು ಇಡಾಭಕ್ಷಣ ಎನ್ನುವರು.",
"Sanskrit": "अतःपरं पुरोहिताः यज्ञाहुतेः अवशिष्टम् अंशं प्रसादरूपेण गृह्णन्ति, तच्च इडाभक्षणम् इत्युच्यते।"
} |
{
"Hindi": "सभी हव्य द्रव्यों के मिश्रण से ईडा प्रस्तूत किया जाता है।",
"Kannada": "ಎಲ್ಲ ಹವ್ಯದ್ರವ್ಯದ ಮಿಶ್ರಣದಿಂದ ಇಡಾ ಎಂಬುದರ ಪ್ರಸ್ತಾಪನೆಯಿದೆ.",
"Sanskrit": "सर्वेषां हव्यद्रव्याणां मिश्रणेन इडा प्रस्तूयते।"
} |
{
"Hindi": "अनुयाज और पत्नीयाज के बाद यजमान के प्रतीक रूप में कुश निर्मित मूर्ति को अग्नि में निक्षिप्त की जाती है।",
"Kannada": "ಅನುಯಾಜ ಮತ್ತು ಪತ್ನೀಯಾಜದ ನಂತರ ಯಜಮಾನನ ಪ್ರತೀಕವಾಗಿ ಕುಶನಿರ್ಮಿತ ಮೂರ್ತಿಯನ್ನು ಅಗ್ನಿಯಲ್ಲಿ ಸಮರ್ಪಿಸಲಾಗುವುದು.",
"Sanskrit": "अनुयाजात् पत्नीयाजात् अनन्तरं यजमानस्य प्रतीकत्वेन कुशनिर्मिता मूर्तिः अग्नौ निक्षिप्यते।"
} |
{
"Hindi": "वह कुशमूर्ति कुश पत्थर कही जाती है।",
"Kannada": "ಆ ಕುಶಮೂರ್ತಿಯು ಕುಶಪ್ರಸ್ತರವೆಂದು ಕರೆಯಲ್ಪಡುತ್ತದೆ.",
"Sanskrit": "सा कुशमूर्तिः कुशप्रस्तरः इत्युच्यते।"
} |
{
"Hindi": "वह मूर्ति जब अग्नि में दग्ध होकर भस्मसात् होती है, तब यजमान इस प्रकार चिन्तन करता है कि उसका पार्थिव शरीर दग्ध हो गया।",
"Kannada": "ಯಾವಾಗ ಆ ಮೂರ್ತಿಯು ಅಗ್ನಿಯಲ್ಲಿ ಭಸ್ಮವಾಗುವುದೋ, ಆಗ ಯಜಮಾನನು ತನ್ನ ಪಾರ್ಥಿವ ಶರೀರವು ಬೂದಿಯಾಯಿತೆಂದು ಭಾವಿಸುತ್ತಾನೆ.",
"Sanskrit": "सा मूर्तिः यदा अग्नौ दग्धा सती भस्मसात् भवति, तदा यजमानः एवं चिन्तयति यत् तस्य पार्थिवशरीरं दग्धम् अभूत्।"
} |
{
"Hindi": "तथा यज्ञ के द्वारा उसकी आत्मा ने विष्णु सायुज्य प्राप्त कर लिया।",
"Kannada": "ಆದರೆ ಯಜ್ಞದ ಮೂಲಕ ಅವನ ಆತ್ಮ ವಿಷ್ಣುವಿನ ಸಾಯುಜ್ಯವನ್ನು ಹೊಂದುತ್ತದೆ.",
"Sanskrit": "किञ्च यज्ञद्वारा तस्य आत्मा विष्णुसायुज्यम् प्राप्तवान्।"
} |
End of preview. Expand in Data Studio
No dataset card yet
- Downloads last month
- 29